ಫಿಲ್ಮೋರ್, ಮಿಲಾರ್ಡ್	
	1800-74. ಅಮೆರಿಕ ಸಂಯುಕ್ತ ಸಂಸ್ಥಾನಗಳ ಹದಿಮೂರನೆಯ ಅಧ್ಯಕ್ಷ. 1823ರಲ್ಲಿ ವಕೀಲವೃತ್ತಿ ಹಿಡಿದ. ನ್ಯೂಯಾರ್ಕ್ ರಾಜ್ಯ ವಿಧಾನ ಸಭೆಯಲ್ಲಿ ಸದಸ್ಯ (1829-31). 1833-43 ಅವಧಿಯಲ್ಲಿ ಎಂಟು ವರ್ಷಕಾಲ ಕಾಂಗ್ರೆಸ್ ಸದಸ್ಯ. 1348ರಲ್ಲಿ ಉಪರಾಷ್ಟ್ರಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಝಕಾರಿ ಟೇಲರ್ ಮಡಿದಾಗ, 1850, ಅಧ್ಯಕ್ಷನಾದ. ಅಧ್ಯಕ್ಷತೆಯ ಅವಧಿ 10 ಜುಲೈ 1850 ರಿಂದ 3 ಮಾರ್ಚ್, 1853ರ ತನಕ, ವ್ಹಿಗ್ ಪಕ್ಷದ ಸದಸ್ಯನಾಗಿದ್ದ ಈತ ಮುಂದಿನ ಅಧ್ಯಕ್ಷ ಚುನಾವಣೆಗೆ ನಿಲ್ಲಲು ಆಶಿಸಿದ್ದರೂ ಪಕ್ಷದಿಂದ ನಾಮಕರಣ ಪಡೆಯದೆ ರಾಜಕೀಯ ರಂಗದಿಂದ ಮರೆಯಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ